ಸ್ಥಾಪನೆ ಹುಬ್ಬಳ್ಳಿ ನಗರದ ಮಧ್ಯ ಭಾಗದಲ್ಲಿರುವ ಒಂದು ಪ್ರಮುಖ ಆಸ್ಪತ್ರೆಯಾಗಿದೆ. ಸುಮಾರು ೮೦ ವರ್ಷಗಳ ಕೆಳಗೆ ಈ ಆಸ್ಪತ್ರೆಯನ್ನು ವುಮನ್ಸ್ ಆಸ್ಪತ್ರೆಯೆಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ ಇದನ್ನು ವಿವೇಕಾನಂದ ಆಸ್ಪತ್ರೆಯೆಂದು ಕರೆಯಲಾಯಿತು. ಈ ಆಸ್ಪತ್ರೆಯ ಮೊದಲ ವೈದ್ಯಾಧಿಕಾರಿ ಶ್ರೀಮತಿ ಡಾ|| ಮಹಾಜನ್ ಅವರು. ಇವರ ಕಾಲದಲ್ಲಿ ಈ ಆಸ್ಪತ್ರೆ ಬಹಳ ಹೆಸರು ಮಾಡಿತು. ವಿವೇಕಾನಂದ ಟ್ರಸ್ಟ್ ಈ ಆಸ್ಪತ್ರ್ರೆಯ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ನಟವರಲಾಲ್ ಶಾಂಘ್ವಿಯವರು ಇದರ ದೈನೆಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದೆ ಆಯುರ್ವೇದ ಚಿಕಿತ್ಸಾ ಪದ್ಧತಿಯೂ ಲಭ್ಯವಿದೆ. ಔಷಧೀಕಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಮಕ್ಕಳ ಮತ್ತು ಸ್ತ್ರೀಯರ ಚಿಕಿತ್ಸೆ ಎಲ್ಲವೂ ಲಭ್ಯವಿವೆ. ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯ ಚಿಕಿತ್ಸಾ ಸಂಬಂಧಿ ಮೇಲ್ವಿಚಾರಣೆಗಾಗಿ, ಒಬ್ಬ ಮುಖ್ಯ ವೈದ್ಯಾಧಿಕಾರಿ, ಇಬ್ಬರು ಸ್ಥಾನಿಕ ವೈದ್ಯಾಧಿಕಾರಿ ಮತ್ತು ಹಲವಾರು ಉಪ ವೈದ್ಯಾಧಿಕಾರಿಗಳು ನಿಯಮಿಸಲ್ಪಟ್ಟಿದ್ದಾರೆ. ಶುಶ್ರೂಷಕಿಯರ ಮತ್ತು ದಾದಿಯರ ಮೇಲ್ವಿಚಾರಣೆಗಾಗಿನ್ ಒಬ್ಬ ಮೇಟ್ರನ್ ನೇಮಿತರಾಗಿದ್ದಾರೆ. == ಉಲ್ಲೇಖ ==